ಕಥಾ ಕಮ್ಮಟ 2022

ತೇಜೋ ತುಂಗಭದ್ರಾ ಹಾಗೂ ಹಲವು ಜನಪ್ರಿಯ ಕಾದಂಬರಿಗಳ ಲೇಖಕರಾದ ವಸುಧೇಂದ್ರ ಅವರು ಆಯೋಜಿಸಿದ 'ಕಥಾ ಕಮ್ಮಟ' ಕಾರ್ಯಕ್ರಮಕ್ಕೆ ಹೋಗಿದ್ದು ಒಂದು ಒಳ್ಳೆ ಅನುಭವ. ಕಥೆ ಬರೆಯುವುದು ಹೇಗೆ? ಎಂಬುದರ ಬಗ್ಗೆ ಅನುಭವ ಹಂಚಿಕೊಂಡರು .

ಇದಕ್ಕೂ ಮೊದಲು,ನಾನು ಕಥೆ ಬರೆಯೋದಕ್ಕೆ ಸುಮಾರು ಬಾರಿ ಪ್ರಯತ್ನಿಸಿದ್ದೀನಿ. ಆದರೆ ಒಮ್ಮೆಯೂ ಮುಗಿಸೋದಕ್ಕೆ ಆಗಿಲ್ಲ. ಈ ಕಾರ್ಯಕ್ರಮದಿಂದ ತುಂಬಾ ಕಲಿತಿದ್ದಂತೂ ಹೌದು. ಆದರೆ ಅದಕ್ಕಿಂತ ಹೆಚ್ಚಾಗಿ, ಒಂದು ಕಾದಂಬರಿ / ಕಥೆ / ಸಿನೆಮಾ ಅಥವಾ ಯಾವುದೇ ಒಂದು ಕಲಾ ವಸ್ತುವನ್ನು ರೂಪಿಸುವ ಹಾಗೂ ಅದನ್ನು ಆಸ್ವಾದಿಸುವ ಬಗ್ಗೆ ಒಂದು ಹೊಸ ಆಯಾಮ ದೊರೆಯಿತು.