A moment to cherish during my Wedding
On the occation of our Marriage Reception, a Book Stall was organized at the venue. A variety of Kannada Literature books were showcased and the guests were invited to take away whichever book they liked.


Event
ಮದುವೆ ಅನ್ನೋದು ಪ್ರತಿಯೊಬ್ಬರಿಗೂ ವಿಶೇಷವಾದ ಸಂದರ್ಭ. ನಮ್ಮ ಮದುವೆ ಕಾರ್ಯಕ್ರಮಕ್ಕೆ ಬಂದವರಿಗೆ ನೆನಪಿನ ಉಡುಗೊರೆಯಾಗಿ ಪುಸ್ತಕವನ್ನು ನೀಡಿದೆವು. ಕನ್ನಡ ಸಾಹಿತ್ಯ ಲೋಕದ ಉತ್ತಮ ಪುಸ್ತಕಗಳನ್ನು ಸ್ಟಾಲ್ ನಲ್ಲಿ ಇಟ್ಟಿದ್ದೆವು. ಅತಿಥಿಗಳು ತಮ್ಮ ಅಭಿರುಚಿಗೆ ತಕ್ಕ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡರು.
ಜನಪ್ರಿಯ ಬರಹಗಾರರಾದ ಆ.ನ.ಕೃ , ತ.ರ.ಸು. , ಕುವೆಂಪು, ಎಸ್.ಎಲ್ ಭೈರಪ್ಪ, ಪೂರ್ಣ ಚಂದ್ರ ತೇಜಸ್ವಿ, ತ್ರಿವೇಣಿ ಮುಂತಾದವರ ಪುಸ್ತಕಗಳನ್ನು ತಂದಿದ್ದೆವು. ಮಕ್ಕಳ ಸಾಹಿತ್ಯ , ಅನುವಾದ, ಮಲೆನಾಡಿನ ಬಗ್ಗೆ, ಪತ್ತೇದಾರಿ, ಹೀಗೆ ಹಲವಾರು ರೀತಿಯ ಸಾಹಿತ್ಯದ ಪುಸ್ತಕಗಳನ್ನು ತಂದಿದ್ದೆವು. ನಾವೇ ಖುದ್ದು ಪ್ರಕಾಶನದ ಕಚೇರಿಗೆ ಹೋಗಿ, ಅತಿ ಜನಪ್ರಿಯ, ಉತ್ತಮ ಗುಣಮಟ್ಟದ ಪುಸ್ತಕಗಳನ್ನೇ ಆಯ್ಕೆ ಮಾಡಿದೆವು.
ಈ ಕೆಲಸದಲ್ಲಿ ಭಾಗಿಯಾದ ಸಾಹಿತ್ಯಾಭಿಮಾನಿಗಳಾದ ನಮ್ಮ ಅಣ್ಣಂದಿರು ಸುಬ್ಬಣ್ಣ , ಅವಿನಾಶ್ ಅವರಿಗೆ ನಾವು ಚಿರಋಣಿ.
ಸ್ಟಾಲ್ ಗಳನ್ನು ತೆಗೆದ 30ನಿಮಿಷದಲ್ಲೇ ಎಲ್ಲ 350 ಪುಸ್ತಕಗಳು ಖಾಲಿಯಾಗಿದ್ದು ನಮ್ಮೂರ ಜನರ ಸಾಹಿತ್ಯ ಅಭಿಮಾನಕ್ಕೆ ಕನ್ನಡಿ ಹಿಡಿಯುತ್ತದೆ.






Contact
manjuprakashr7@gmail.com
Social Media
+91 8762546879